Popular Posts

Wednesday, January 1, 2014

A kannada composition on lord shrI rAma

ಹರಿಃ ಓಂ

ಶ್ರೀ ಮೂಲ ರಾಮೋ ವಿಜಯತೆ

ಇಂದು ಬಂದಿತು ನೋಡೋ ಶ್ರೀ ರಾಮನ ಈ ಬಾಣ
ಅಂದೇ ಬಿಟ್ಟಿತು ನೋಡೋ ರಕ್ಕಸರ ಆ ತಂಗುತಾಣ
ಪರಮ ಸುಜ್ನಾನವ ನೀಡುವ ಶ್ರೀ ರಾಮನ ಈ ಬಾಣ
ಘೋರಾಜ್ನಾನವ ನೀಡುವ ಶ್ರೀ ರಾಮನ ಆ ಬಾಣ
ಏಳು ಹಿರಿದ ಮರಗಳ ಸೀಳಿಪೋಗುವ ಈ ಬಾಣ

ಮೂರು ಅಕ್ಷರವ ತಂದು ಬಿಡಿಬಿಡಿಸಿಡುವ ಈ ಬಾಣ
ಐದು ಪಂಜರ ಸೀಳಿ ಒಳನುಗ್ಗಿ ರಕ್ಷಿಸುವ ಈ ಬಾಣ
ಐದು ಇಂದ್ರಿಯಕೂಡಿ ಕೂಡ ಗ್ರಹಿಸಲಾಗದ ಈ ಬಾಣ
ಸರ್ವಮಾರಕನಾದ ಶ್ರೀ ರಾಮನ ಒಂದು ಬಾಣ
ಮಧ್ವ ಮುನಿಯು ಕೊಂಡಾಡಿದ ಶ್ರೀ ರಾಮನ ಈ ಬಾಣ

ಶ್ರೀ ಕ್ರಿಷ್ಣಾರ್ಪಣಮಸ್ತು ಹರಿಃ ಓಂ
hariH OM

iMdu baMditu nODO shrI raamana I baaNa
aMdE biTTitu nODO rakkasara A taMgutANa
parama sujnAnava nIDuva shrI rAmana I bANa
ghOrAjnAnava nIDuva shrI rAmana A bANa
ELu hirida maragaLa sILipOguva I bANa

mUru akSharava taMdu biDibiDisiDuva I bANa
aidu paMjara sILi oLanuggi rakShisuva I bANa
aidu iMdriyakUDi kUDa grahisalAgada I bANa
sarvamArakanAda shrI rAmana oMdu bANa
madhwa muniyu koMDADida shrI rAmana I bANa

shrI kriShNArpaNamastu hariH OM

- sunil anandatheertha

No comments:

Post a Comment