ಶ್ರೀ ರಾಮ ಜಯ ರಾಮ ಜಗದೊಡೆಯ ರಾಮ
ಜಗದೊಡೆಯ ಎನ್ನೊಡೆಯ ರಾಮ ರಘುರಾಮ
ರಘುಕುಲದ ಶ್ರೀ ರಾಮ ಹನುಮಂತನೊಡೆಯ
ಸೀತಾಪತಿ ಶ್ರೀ ರಾಮ ಜಯವಿಜಯರೊಡೆಯ
ಧರ್ಮದ ಗುರು ನೀ ರಾಮ ಬಹುಬ್ರುಹತ್ತಿನೊಡೆಯ
ಬೆಳೆಬೆಳೆವ ಶ್ರೀ ರಾಮ ನೀ ಲಕ್ಷ್ಮಣರರೋಡೆಯ
ಹೊಳೆಹೊಳೆವ ಶ್ರೀ ರಾಮ ಹೊಳೆಹೊಳೆವರೊಡೆಯ
ಏಳು ಕಾಂಡದಿ ಬರುವ ರಾಮಾಯಣದೊಳಗಿರುವ
ಏಳು ಬಣ್ಣದಿ ಬರುವ ಜ್ನಾನರೇಖೆಗಳೊಳಗಿರುವ
ಲೋಕೋಧ್ದಾರಕನೆ ಏಳು ಜೀವೋಧಾರಕನೆ ಏಳು
ಜ್ನಾನಪೋಶಕನೆ ಏಳು ಭಕ್ತಜನರೊಡೆಯನೆ ಏಳು
ಶ್ರೀ ರಾಮ ನಿದ್ದೆಸಾಕಿನ್ನೇಳು ಬೆಳಗಾಯ್ತು ಏಳು
ಶ್ರೀ ಕ್ರಿಷ್ಣಾರ್ಪಣಮಸ್ತು ಹರಿಃ aum
jai shrI raam
- sunil anandatheertha
No comments:
Post a Comment